Dhananjaya_Kengaiah
Dhananjaya Kengaiah
VPA President

Dear VPA Family,

It gives me an immense pride and joy to invite you all to the 18th VPA Convention, Vishwa Vokkaligara Sammelana, which will be held from July 3 to 5, 2025, at the McEnery Convention Center in San Jose, USA. This grand gathering marks a significant milestone in our shared journey as a vibrant and united community.

This event will celebrate the rich traditions and contributions of Vokkaligas worldwide while providing a platform to promote cultural heritage, innovation, education, and community development. The theme for this year, “Ulutha Saagihevu Jagavemba Holavanu” – meaning a bond that cultivates harmony – symbolizes the spirit of togetherness, progress, and compassion that defines our community.

Key Highlights of the 18th VPA Convention include: (a) Prominent Guest Speakers – leaders, dignitaries, and scholars will share insights on issues impacting the global Vokkaliga community; (b) Youth and Cultural Programs – special activities focusing on youth leadership, career growth, and cultural preservation; (c) Recognition of Achievements – felicitation of outstanding Vokkaliga achievers across diverse fields, including education, technology, healthcare, entrepreneurship, and agriculture; (d) Networking Opportunities – strengthening connections among Vokkaligas from India, the USA, and other parts of the world; (e) Cultural Extravaganza – a vibrant display of Vokkaliga art, music, and traditions to inspire pride and unity.

We are honored to have Jagadguru Sri Sri Sri Dr. Nirmalanandanatha Mahaswamiji, the Pontiff of Sri Adichunchanagiri Mahasamsthana Math, bless this historic event with his presence.

This convention is a unique opportunity for every member of the Vokkaliga community to contribute, participate, and reconnect with our roots. Whether you are a volunteer, performer, or enthusiastic participant, your involvement will make this event successful.

Let us unite to honor our legacy, inspire future generations, and create a lasting impact. I invite you, your families, and friends to join us for this extraordinary gathering and contribute to strengthening our shared future.

For more details and registration, please visit https://myvpa.org.

 

With gratitude and anticipation,

Dhananjaya Kengaiah
President, VPA
Email: president@myvpa.org.
Website: www.myvpa.org

 

ಅಧ್ಯಕ್ಷರ ಸಂದೇಶ
18ನೇ ವಿಶ್ವ ಒಕ್ಕಲಿಗರ ಸಮ್ಮೇಳನ
ಜುಲೈ 3-5, 2025 | ಮೆಕೆನರಿ ಕನ್ವೆನ್ಷನ್ ಸೆಂಟರ್, ಸ್ಯಾನ್ ಹೊಸೇ, ಅಮೆರಿಕ

ಪ್ರಿಯ ಒಕ್ಕಲಿಗರ ಕುಟುಂಬ,
18ನೇ ವಿಶ್ವ ಒಕ್ಕಲಿಗರ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇನೆ. ಈ ಅದ್ಧೂರಿ ಕಾರ್ಯಕ್ರಮವು 2025ರ ಜುಲೈ 3 ರಿಂದ 5ರವರೆಗೆ ಅಮೆರಿಕದ ಸ್ಯಾನ್ ಹೊಸೇ ನಗರದಲ್ಲಿ ನಡೆಯಲಿದೆ. ನಮ್ಮ ಸಮುದಾಯದ ವೈಭವ, ಪರಂಪರೆ, ಮತ್ತು ಯಶಸ್ಸನ್ನು ವಿಶ್ವಾದ್ಯಂತ ಬೆಳಗಿಸುವ ಈ ಸಮ್ಮೇಳನವು ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ.
ಈ ಬಾರಿಯ ಸಮ್ಮೇಳನದ “ಉಳುತ ಸಾಗಿಹೆವು ಜಗವೆಂಬ ಹೊಲವನು” ಎಂಬ ಥೀಮ್ (ವಿಷಯ) ಸಹಕಾರ, ಪ್ರಗತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ಪ್ರತಿಪಾದಿಸುತ್ತದೆ. ನಮ್ಮ ಸಮುದಾಯದ ಶ್ರೇಷ್ಠತೆ ಮತ್ತು ಭವಿಷ್ಯದ ಬೆಳವಣಿಗೆಗೆ ಈ ವೇದಿಕೆ ಸೇವೆಸಲ್ಲಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ನಮ್ಮ ಕೊಡುಗೆಗಳನ್ನು ಸ್ಮರಿಸಲು ಮತ್ತು ಹೊಸತನ್ನು ಸೃಷ್ಟಿಸಲು ಸಹಾಯ ಮಾಡಲಿದೆ.
18ನೇ VPA ಸಮ್ಮೇಳನದ ಪ್ರಮುಖ ಅಂಶಗಳು (ಅ) ಪ್ರಮುಖ ಅತಿಥಿಗಳು ಮತ್ತು ವಿಚಾರ ಸಂಕಿರಣಗಳು: ಗಣ್ಯ ವಿದ್ವಾಂಸರು, ಮುಖಂಡರು ಮತ್ತು ವಿಜ್ಞಾನಿಗಳು ನಮ್ಮ ಸಮುದಾಯದ ಭವಿಷ್ಯದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. (ಆ) ಯುವಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು: ಯುವ ನಾಯಕತ್ವ, ಉದ್ಯೋಗ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮಗಳು. (ಇ) ಗೌರವ ಸಮಾರಂಭ: ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಮತ್ತು ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಒಕ್ಕಲಿಗರನ್ನು ಸನ್ಮಾನಿಸುವುದು.
(ಈ) ಜಾಲಬಂಧದ ಅವಕಾಶಗಳು: ಭಾರತ, ಅಮೆರಿಕಾ ಮತ್ತು ಇತರ ದೇಶಗಳ ಒಕ್ಕಲಿಗರನ್ನು ಒಂದುಗೂಡಿಸಿ ಸಂಬಂಧಗಳನ್ನು ಗಟ್ಟಿಗೊಳಿಸುವುದು. (ಉ) ಸಾಂಸ್ಕೃತಿಕ ವೈಭವ: ನಮ್ಮ ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು.
ಇದರ ಜೊತೆಗೆ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಶ್ರೀ ಅದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳು, ತಮ್ಮ ಆಶೀರ್ವಾದವನ್ನು ಈ ಸಮ್ಮೇಳನಕ್ಕೆ ನೀಡಲಿದ್ದಾರೆ.

ನಮ್ಮ ಸಮುದಾಯದ ಪ್ರತಿಯೊಬ್ಬರ ಸಹಭಾಗಿತ್ವವು ಈ ಸಮ್ಮೇಳನದ ಯಶಸ್ಸಿಗೆ ಅತ್ಯಗತ್ಯವಾಗಿದೆ. ನೀವು ಸ್ವಯಂಸೇವಕರಾಗಿ, ಕಲಾವಿದರಾಗಿ ಅಥವಾ ಉತ್ಸಾಹಿಗಳಾಗಿ ಭಾಗಿಯಾಗಿ, ನಿಮ್ಮ ಎಲ್ಲಾ ಕೊಡುಗೆಗಳು ಸಮುದಾಯವನ್ನು ಇನ್ನಷ್ಟು ಗಟ್ಟಿಯಾಗಿಸಲು ಸಹಾಯ ಮಾಡಲಿದೆ.
ನಮ್ಮ ಪರಂಪರೆ ಮತ್ತು ಒಕ್ಕಲಿಗರ ಶ್ರೇಷ್ಠತೆಯನ್ನು ಜಗತ್ತಿಗೆ ತಲುಪಿಸಲು ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಲು ಈ ಸಮ್ಮೇಳನವೇ ಉತ್ತಮ ವೇದಿಕೆ. ನಾನು ನಿಮ್ಮೆಲ್ಲರನ್ನು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ, ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸದುದ್ದೇಶದಿಂದ ಆಹ್ವಾನಿಸುತ್ತೇನೆ.

ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ https://myvpa.org ವೆಬ್‌ಸೈಟ್‌ಗೆ ಭೇಟಿ ನೀಡಿ.

ಕೃತಜ್ಞತೆಗಳೊಂದಿಗೆ,
ಧನಂಜಯ ಕೆಂಗಯ್ಯ
ಅಧ್ಯಕ್ಷ, VPA
ಇಮೇಲ್: president@myvpa.org
ವೆಬ್‌ಸೈಟ್: www.myvpa.org